ಜೂರಾ ಶಾಸನ ಮಧ್ಯ ಪ್ರದೇಶದ ಜಬ್ಬಲ್‍ಪುರ ಗ್ರಾಮದಲ್ಲಿ ದೊರೆತ ಕನ್ನಡ ಶಾಸನವಾಗಿದೆ. ಇದರ ಕಾಲ ಸುಮಾರು ೯೪೭. ರಾಷ್ಟ್ರಕೂಟ ಮೂರನೆ ಕೃಷ್ಣನು ಪರಾಂಗನ ಪುತ್ರತ್ವ ಮತ್ತು ಶೌರ್ಯವನ್ನು ಕೊಂಡಾಡಿರುವ ಶಾಸನವಿದು. ಉಬ್ಬಿಕಾಮೈಸೆಟ್ಟಿಯ ತಮ್ಮ ತುಯ್ಯಲ ಚನ್ದಯ್ಯನು ಈ ಪ್ರಶಸ್ತಿ ಶಾಸನವನ್ನು ಬರೆಸಿದನೆಂದು, ಏಚಿಮಯ್ಯ ಎಂಬುವವನು ಬರೆದಿದ್ದಾನೆಂದು ತಿಳಿದು ಬರುತ್ತದೆ..... == ಇತಿವೃತ್ತ == ಉತ್ತರ ಭಾರತದ ದಿಗ್ವಿಜಯ ಸಂದರ್ಭದಲ್ಲಿ ಬರೆದ ಈ ಶಾಸನ ರಾಷ್ಟ್ರಕೂಟ ಮೂರನೆ ಕೃಷ್ಣನ ವಿಜಯಸ್ತಂಭದಂತಿದೆ. ಹೊರನಾಡಿನಲ್ಲಿ ದೊರೆತಿರುವ ಅಪೂರ್ವ ಕನ್ನಡ ಶಾಸನವೆಂಬ ಮಹತ್ವ್ತ ಇದಕ್ಕಿದೆ. ರಾಷ್ಟ್ರಕೂಟರ ಕಾಲದ ಜನರು ನಂಬಿ ಎತ್ತಿಡಿದ ಜೀವನಮೌಲ್ಯಗಳಲ್ಲಿ ಪರನಾರಿ ಸೋದರತ್ವವೂ ಒಂದು. ಕನ್ನರದೇವನಂತಹ ಪರಾಂಗನ ಪುತ್ರರನ್ನು ಗುರ್ತಿಸಿದ ಶಾಸನಕವಿ, ಸಹಜವಾಗಿ ಈ ಬಗ್ಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದಾನೆ. == ಜೂರಾ ಶಾಸನ ತಾತ್ಪರ್ಯ == ಅವನು ಪರಸ್ತ್ರೀಗೆ ಸೋಲುವವನಲ್ಲ. ಅವರನ್ನು ನೋಡಿದರೆ ಮೊಲೆಹಾಲನ್ನು ಕುಡಿಸಿ ಬದುಕು ನೀಡಿದ ತಾಯಿಗಿಂತ ಹೆಚ್ಚಾಗಿ ಗೌರವಿಸುತ್ತಿದ್ದ. ಎಂತಹ ಪರಿಸ್ಥಿತಿಯಲ್ಲೂ ಪರಸ್ತ್ರೀಗೆ ಆತನ ಚಿತ್ತ ಸೋತುದ್ದಿಲ್ಲವಂತೆ! ಇನ್ನೊಂದು ಪದ್ಯದಲ್ಲಿ - == ಶಾಸನದ ಪೂರ್ಣಪಾಠ ==